Admission of Notification to 6th std in ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಸಂಕ್ಷಿಪ್ತ ವಿವರ:
ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.//MDRS/GMRS/Dr.APJ AKRS
ಡಾ. ಎ. ಪಿ. ಜೆ ಅಬ್ದುಲ್ ಕಲಾಂ ವಸತಿ ಶಾಲೆ (CBSE) 29, ಮುರಾರ್ಜಿ ದೇಸಾಯಿ ವಸತಿ ಶಾಲೆ 90, ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು 04. ಒಟ್ಟು 123 ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದವರಾದ
ಮುಸ್ಲಿಮ್ಸ್ ,ಕ್ರಿಶ್ಚಿಯನ್ಸ್ ,ಜೈನ್ ,ಬುದ್ಧಿಸ್ಟ್ ಮತ್ತು ಪಾರ್ಸಿ ಅರ್ಹ ವಿದ್ಯಾರ್ಥಿ ಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
6ನೇ ತರಗತಿಯ ಪ್ರವಶಾತಿ ಸಂಖ್ಯೆಯು ಈ ಕೆಳಗಿನಂತೆ ಇರುತ್ತದೆ:
ವರ್ಗವಾರು ಮೀಸಲಾತಿ ಹಂಚಿಕೆ:
1. ಸರ್ಕಾರಿ ಮುಸ್ಲಿಂ ವಸತಿ ಶಾಲೆ:-
a. ಈ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ: 50
b. ಮುಸ್ಲಿಂ :100%(50 ವಿದ್ಯಾರ್ಥಿಗಳು)
C. ಹೆಣ್ಣು ಮಕ್ಕಳಿಗೆ 50% ಸ್ಥಾನಗಳನ್ನು ಮೀಸಲಿರಿಸಲಾಗಿದೆ.
2. ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ/ಡಾಕ್ಟರ್. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು:-
a. ಪ್ರತಿ ವಸತಿ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ: 50
b. ಮೀಸಲಾತಿ ಅಲ್ಪಸಂಖ್ಯಾತರು: 75%(38 ವಿದ್ಯಾರ್ಥಿಗಳು)
c. ಇತರೆ ವರ್ಗದ ಮೀಸಲಾತಿ: 25% (12 ವಿದ್ಯಾರ್ಥಿಗಳು)
d. ಹೆಣ್ಣು ಮಕ್ಕಳಿಗೆ 50 ಪರ್ಸೆಂಟ್ ಸ್ಥಾನಗಳನ್ನು ಮೀಸಲಿರಿಸಿದಾಗಿದೆ.
3. ಡಾ. ಎ .ಪಿ.ಜಿ ಅಬ್ದುಲ್ ಕಲಾಂ ವಸತಿ ಶಾಲೆಗಳು:-
ಪ್ರತಿ ವರ್ಷದ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ:80
a. ಪ್ರತಿ ವಿಭಾಗಕ್ಕೆ 40 ವಿದ್ಯಾರ್ಥಿಗಳಂತೆ 02 ವಿಭಾಗಗಳು
b. ಪ್ರತಿ ವಿಭಾಗದ ಪ್ರವೇಶ ಸಂಖ್ಯೆ :40
c. ಮೀಸಲಾತಿ ಅಲ್ಪಸಂಖ್ಯಾತರು: 75%(30 ವಿದ್ಯಾರ್ಥಿಗಳು)
d. ಇತರೆ ವರ್ಗದ ಮೀಸಲಾತಿ: 25%(10 ವಿದ್ಯಾರ್ಥಿಗಳು)
e. ಹೆಣ್ಣು ಮಕ್ಕಳಿಗೆ 50% ಸ್ಥಾನಗಳನ್ನು ಮೀಸಲಿ ರಿಸಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 16-02-24
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:15-03-24
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
1. ಅಭ್ಯರ್ಥಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಿಂದ ಐದನೆಯ ತರಗತಿಯಲ್ಲಿ ಪ್ರಸಂಗ ಮಾಡುತ್ತಿರಬೇಕು/ಉತ್ತೀರ್ಣವಾಗಿರಬೇಕು. ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಅಂಕಪಟ್ಟಿಯನ್ನು ಹೊಂದಿರಬೇಕು.
2. ಕರ್ನಾಟಕ ರಾಜ್ಯ ಖಾಯಂ ನಿವಾಸಿ ಆಗಿರಬೇಕು.
3. 11 ರಿಂದ 13 ವರ್ಷದ ವಯೋಮಾನದವರಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3. ವಿದ್ಯಾರ್ಥಿ ಅಂಗವಿಕಲ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸೇವಾ ಸಿಂಧು ಪ್ರೋಟಲ್ ನಲ್ಲಿ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಅಥವಾ ಹತ್ತಿರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ಶಾಲೆಗಳು, ಅಲ್ಪಸಂಖ್ಯಾತರ ತಾಲೂಕ ಮಾಹಿತಿ ಕೇಂದ್ರಗಳು ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಕೂಡ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಕಾಮೆಂಟ್‌ಗಳಿಲ್ಲ