ಏನಿಲ್ಲ ಏನಿಲ್ಲ ಕೆರೆಯಲ್ಲಿ ನೀರೇ ಇಲ್ಲ /ಸೂಳೆಕೆರೆ (ಶಾಂತಿ ಸಾಗರ ಕೆರೆ) ನೀರು ಬತ್ತಿ ಹೋಗಿದೆ
ಏನಿಲ್ಲ ಏನಿಲ್ಲ ಕೆರೆಯಲ್ಲಿ ನೀರೇ ಇಲ್ಲ /ಸೂಳೆಕೆರೆ (ಶಾಂತಿ ಸಾಗರ ಕೆರೆ) ನೀರು ಬತ್ತಿ ಹೋಗಿದೆ
ಏಷ್ಯಾದ ಎರಡನೇ ಅತಿದೊಡ್ಡ ಕೆರೆಯಾದ ಚನ್ನಗಿರಿ ತಾಲೂಕಿನ ಶಾಂತಿ ಸಾಗರ ಬತ್ತಿ ಹೋಗುತ್ತಿದೆ ಸೂಳೆಕೆರೆ ಇದು ಚೆನ್ನಾಗಿರಿಯ ತಾಲೂಕಿನಲ್ಲಿ ಚೆನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿಲೋಮೀಟರ್ ದೂರದಲ್ಲಿರುವ ಒಂದು ಕೆರೆ. ಈಕೆರೆ ಶಾಂತಿ ಸಾಗರ ಎಂಬ ಮತ್ತೊಂದು ಹೆಸರಿನಿಂದ ಜನಪ್ರಿಯವಾಗಿದೆ. 12ನೇ ಶತಮಾನದಲ್ಲಿ ಕಟ್ಟಲಾದ ಕೆರೆ ಸುಮಾರು 539.18 ಚ.ಮೈ.ಲಿ ವಿಸ್ತಾರವಾಗಿದೆ ಈಕೆರೆಯನ್ನು ಹರಿದ್ರಾವತಿ ನದಿಗೆ (ಹಿರೇ ಹಳ್ಳ) ಅಡ್ಡವಾಗಿ ಕಟ್ಟಲಾಗಿದೆ. ಈ ಕೆರೆವು ಸುಮಾರು 37 ಹಳ್ಳಿಗಳ 2879 ಹೆಕ್ಟರು ಜಾಗಕ್ಕೆ ನೀರನ್ನು ಪೂರೈಸಿತ್ತು.ಈಗಿನ ಸದ್ಯ ಪರಿಸ್ಥಿತಿಯ
ಚನ್ನಗಿರಿ ತಾಲ್ಲೂಕಿನಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಶಾಂತಿ ಸಾಗರ ಅಥವಾ ಸೂಳೇಕೆರೆ ಮಳೆಯಿಲ್ಲದೆ ಒಣಗುತ್ತಿದೆ. ನೀರಿನ ಮಟ್ಟ 7-8 ಅಡಿಗೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಹುದು.ಈ ಕೆರೆಯು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಹಲವಾರು ಭಾಗಗಳಿಗೆ ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿ ನೀರನ್ನು ಒದಗಿಸುತ್ತದೆ. ಕೆರೆಯಲ್ಲಿ ಕುದುರೆ ತೂಬು ಕಾಣಿಸಿಕೊಂಡಿರುವುದು ರೈತರಲ್ಲಿ ಬರದ ಆತಂಕವನ್ನು ಹೆಚ್ಚಿಸಿದೆ.
ಕಾಮೆಂಟ್‌ಗಳಿಲ್ಲ